Monday, November 22, 2010

ನಾವುಗಳು ನಮ್ಮ ಸಾಫ್ಟ್‌ವೇರ್ ಕಂಪನಿಗಳು!

ನಾವುಗಳು ನಮ್ಮ ಸಾಫ್ಟ್‌ವೇರ್ ಕಂಪನಿಗಳು!

ನಾವುಗಳು ನಮ್ಮ ಸಾಫ್ಟ್‌ವೇರ್ ಕಂಪನಿಗಳು...
ಖಾಲಿ ಹೊಡೆಯುವ ಕ್ಯೂಬಿಕಲ್ಲುಗಳು,
ಸ್ಕ್ರ್ಯಾಪ್ ಆಗಿ ಹೋದ ಪ್ರಾಜೆಕ್ಟುಗಳು...

ಟ್ರೇನಿಂಗ್

ತೆಗೆದುಕೊಂಡು ಕೈ ಕೊಡುವ ಫ್ರೆಷರುಗಳು,
ಸೀನಿಯರುಗಳು ಅನುಭವಿಸುವ ಪ್ರೆಷರುಗಳು...

ಡೆಡ್ಲೈನುಗಳು, ನೈಟೌಟುಗಳು, ರಿಲೀಸುಗಳು,
ಪಿಜ್ಜಾ, ಬರ್ಗರ್, ಡಿನ್ನರ್ ಆರ್ಡರುಗಳು...

ಏನೂ ಕಿಸಿಯದೆ ಕಾಸುಗಿಟ್ಟಿಸುವ ವೇಸ್ಟು ಬಾಡಿಗಳು,
ಎಷ್ಟು ಕಿಸಿದರೂ ಕಿರೀಟ ಗಳಿಸದ ನತದೃಶ್ಟ ಗೂಬೆಗಳು...

ಕಾಸು ಗಿಟ್ಟಿಸದ ಡೆಮೋ ಪ್ರಾಜೆಕ್ಟುಗಳು,
ಕೈಗೆ ಸಿಗದೆ ಕನಸಾಗಿ ಉಳಿಯುವ ಪ್ರಪೋಸಲ್ಲುಗಳು...

ಕೈ ಹಿಡಿದು ನಡೆಸದ ಟೀಮ್ ಲೀಡರುಗಳು,
ತಲೆ ಸವರಿ ಕೈ ಕೊಡುವ ಮ್ಯಾನೇಜರುಗಳು...

ಕಾಕ್‌ಟೇಲ್ ಪಾರ್ಟಿಯಲ್ಲಿ ಕುಡಿದು ಕಕ್ಕುವ ಆಲ್ಕೋಹಾಲಿಕ್ಕುಗಳು,
ವೀಕೆಂಡನಲ್ಲೂ ಆಫೀಸಿನಲ್ಲೇ ಸಾಯುವ ವರ್ಕೋಹಾಲಿಕ್ಕುಗಳು...

Windowsಗಳು, Linuxಗಳು, Androidಗಳು,
ಕುಂಟುತ್ತಾ ನಡೆದ Symbianಗಳು...

MIPSಗಳು, DSPಗಳು, ARMಗಳು,
ಸಿಸ್ಕುಗಳನ್ನು ಮೀರಿ ಬೆಳೆಯುತ್ತಿರುವ ರಿಸ್ಕುಗಳು...

Nokiaಗಳು, Samsungಗಳು, TIಗಳು,
ಅಲ್ಲೇ ಸೇರಬೇಕೆಂದು ಬಡಿದುಕೊಳ್ಳುವ ಬಾಯಿಗಳು...

ಡಾಲರುಗಳು, ಪೌಂಡುಗಳು, ಯೂರೋಗಳು,
ಅದರಲ್ಲೇ ಗಳಿಸಬೇಕೆಂಬ ಹೀರೋಗಳು...

Out of the boxಥಿಂಕಿಂಗುಗಳು, Big pictureಗಳು, Positive attitudeಗಳು,
Self motivationಗಳು, open mindಗಳು, not-so kindಗಳು...

ನಾವುಗಳು ನಮ್ಮ ಸಾಫ್ಟ್‌ವೇರ್ ಕಂಪನಿಗಳು...

Saturday, June 26, 2010

ಕನ್ನಡ ಕವನ

ಬೇಸರ ಬೇಸರ ಏನಿದು ಬೇಸರ
ಪರಿಸರ ಒಗ್ಗದಿರೆ ಬೇಸರ
ಕೆಲಸ ಬೇಡದಿರೆ ಬೇಸರ
ಕೆಲಸ ಮುಗಿದರೆ ಬೇಸರ
ಬೆಳಗಾದರೆ ಬೇಸರ
ಈ ಬೇಸರ ಬೇಸತ್ತ ಜನಕ್ಕೆ ಹೊರತು ಸತ್ತ ಜನಕೆ ಇನ್ನ್ಯಾವ ಬೇಸರ ??


ಮುಂದುವರೆಯುವುದು ......................................